ಸರ್ ಡೇವಿಡ್ ಫ್ರೆಡೆರಿಕ್ ಅಟೆನ್ಬರೋ (ಜನನ 8 ಮೇ 1926) ಒರ್ವ ಆಂಗ್ಲ ದೂರದರ್ಶನ ಪ್ರಸಾರಕ ಮತ್ತು ನೈಸರ್ಗಿಕ ಇತಿಹಾಸ ತಜ್ಞ. ಇವರು ಬಿಬಿಸಿಯ ನ್ಯಾಚುರಲ್ ಹಿಸ್ಟರಿ ಯುನಿಟ್ ಸಂಯೋಗದೊಂದಿಗೆ ಮಾಡಿದ ಒಂಬತ್ತು ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರ ಸರಣಿಯಲ್ಲಿನ ಬರಹ ಮತ್ತು ನಿರೂಪಣೆಗೆ ಹೆಸರುವಾಸಿಯಾಗಿದ್ದಾರೆ. ಅವರು ಬಿಬಿಸಿಯ ಹಿರಿಯ ವ್ಯವಸ್ಥಾಪಕರಾಗಿದ್ದರು. ಬ್ರಿಟನ್ನಲ್ಲಿ ಅಟೆನ್ಬರೋ ಇವರನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗುತ್ತದೆ, ಆದರೆ, ಅವರು ಹಾಗೆ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. 2002 ರಲ್ಲಿ ಬಿಬಿಸಿಯ ಯುನೈಟೆಡ್ ಕಿಂಗ್ಡಮ್ ಸಮೀಕ್ಷೆಯಲ್ಲಿ 100 ಶ್ರೇಷ್ಠ ಬ್ರಿಟನ್ನರಲ್ಲಿ ಅವರಲ್ಲಿ ಹೆಸರಿಸಲ್ಪಟ್ಟರು. ಅವರು ನಿರ್ದೇಶಕ, ನಿರ್ಮಾಪಕ ಮತ್ತು ನಟ [[ರಿಚರ್ಡ್ ಅಟೆನ್ಬರೋ]] ಅವರ ಕಿರಿಯ ಸಹೋದರ, ಮತ್ತು ಮೋಟಾರ್ ಕಾರ್ಯನಿರ್ವಾಹಕ ಜಾನ್ ಅಟೆನ್ಬರೋ ಅವರ ಹಿರಿಯ ಸಹೋದರ. == ಆರಂಭಿಕ ಜೀವನ ಮತ್ತು ಕುಟುಂಬ == ಅಟೆನ್ಬರೋ ಅವರು ಪಶ್ಚಿಮ ಲಂಡನ್ ಭಾಗದ ಐಲ್ವರ್ತ್ , ಮಿಡ್ಲ್ಸೆಕ್ಸ್ ನಲ್ಲಿ ಜನಿಸಿದರು . ಅದರೆ ಅವರು ಬೆಳದದ್ದೆಲ್ಲ ಅವರ ತಂದೆ ಪ್ರಾಚಾರ್ಯರಾಗಿದ್ದ ಲೀಸೆಸ್ಟರ್ ಯೂನಿವರ್ಸಿಟಿ ಕಾಲೇಜಿನ ಆವರಣದಲ್ಲಿ .ಅವರ ಹಿರಿಯ ಸಹೋದರ, ನಟ ಮತ್ತು ನಿರ್ದೇಶಕ ರಿಚರ್ಡ್ 2014 ರಲ್ಲಿ ನಿಧನರಾದರು,ಮತ್ತು ಅವರ ಕಿರಿಯ ಸಹೋದರ ಜಾನ್, ಇಟಾಲಿಯ ಕಾರು ತಯಾರಕ ಕಂಪನಿ ಆಲ್ಫಾ ರೋಮಿಯೊದಲ್ಲಿ ಕಾರ್ಯನಿರ್ವಾಹಕರಾಗಿದ್ದರು, ಅವರು 2012 ರಲ್ಲಿ ನಿಧನರಾದರು . ಎರಡನೇ ಮಹಾಯುದ್ಧದ ಸಮಯದಲ್ಲಿ , ರೆಫ್ಯೂಗಿ ಚಿಲ್ಡ್ರನ್ಸ್ ಮೂವ್ಮೆಂಟ್ ಎಂದು ಕರೆಯಲ್ಪಡುವ ಬ್ರಿಟಿಷ್ ಸ್ವಯಂಸೇವಕ ನೆಟ್ವರ್ಕ್ ಮೂಲಕ, ಅವನ ಹೆತ್ತವರು ಯೂರೋಪ್ನಿಂದ ಇಬ್ಬರು ಯಹೂದಿ ನಿರಾಶ್ರಿತ ಹುಡುಗಿಯರನ್ನು ಪೋಷಿಸಿದ್ದಾರೆ. ಅಟೆನ್ಬರೋ ಲೀಸೆಸ್ಟರ್ನ ಬಾಯ್ಸ್ ವಿಗ್ಗೆಸ್ಟನ್ ಗ್ರಾಮರ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದರು ಮತ್ತು ನಂತರ 1945 ರಲ್ಲಿ ಕೇಂಬ್ರಿಜ್ನ ಕ್ಲೇರ್ ಕಾಲೇಜ್ಗೆ ವಿದ್ಯಾರ್ಥಿವೇತನವನ್ನು ಪಡೆದರು, ಅಲ್ಲಿ ಅವರು ಭೂವಿಜ್ಞಾನ ಮತ್ತು ಪ್ರಾಣಿಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. 1947 ರಲ್ಲಿ ಅವರಿಗೆ ರಾಯಲ್ ನೌಕಾಪಡೆಯಲ್ಲಿ ರಾಷ್ಟ್ರೀಯ ಸೇವೆಗಾಗಿ ಕರೆ ಬಂದಿತು ಮತ್ತು ನಾರ್ತ್ ವೇಲ್ಸ್ ಮತ್ತು ಫೋರ್ತ್ನ ಫಿರ್ತ್ನಲ್ಲಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. 1950 ರಲ್ಲಿ ಅಟೆನ್ಬರೋ ಜೇನ್ ಎಲಿಜಬೆತ್ ಎಬ್ಸ್ವರ್ತ್ ಓರಿಯಲ್ಳನ್ನು ವಿವಾಹವಾದರು; ಅವರು 1997 ರಲ್ಲಿ ನಿಧನರಾದರು. ದಂಪತಿಗೆ ಇಬ್ಬರು ಮಕ್ಕಳು, ರಾಬರ್ಟ್ ಮತ್ತು ಸುಸಾನ್ . ರಾಬರ್ಟ್ ಅವರು ಕ್ಯಾನ್ಬೆರಾದಲ್ಲಿನ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಆರ್ಕಿಯಾಲಜಿ ಮತ್ತು ಮಾನವಶಾಸ್ತ್ರದಲ್ಲಿ ಜೈವಿಕಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದಾರೆ. ಸುಸಾನ್ ಮಾಜಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ. === ಪ್ರಶಸ್ತಿಗಳು === 2017: ಬ್ರಿಟಿಷ್-ಆಸ್ಟ್ರೇಲಿಯಾ ಸೊಸೈಟಿ ಪ್ರಶಸ್ತಿ ಬ್ರಿಟಿಷ್ / ಆಸ್ಟ್ರೇಲಿಯಾ ದ್ವಿಪಕ್ಷೀಯ ತಿಳುವಳಿಕೆ ಮತ್ತು ಸಂಬಂಧಗಳನ್ನು ಬಲಪಡಿಸುವ ಅತ್ಯುತ್ತಮ ಕೊಡುಗೆಗಾಗಿ 2017: ಮಾಸ್ಕೋ ಸೊಸೈಟಿ ಆಫ್ ನ್ಯಾಚುರಲಿಸ್ಟ್ಸ್ನ ಗೌರವಾನ್ವಿತ ಸದಸ್ಯ 2017: ರಾಯಲ್ ಕೆನೆಡಿಯನ್ ಜಿಯೋಗ್ರಾಫಿಕಲ್ ಸೊಸೈಟಿಯ ಚಿನ್ನದ ಪದಕ 2018: ಅತ್ಯುತ್ತಮ ನಿರೂಪಕರಿಗೆ ಪ್ರೈಮ್ಟೈಮ್ ಎಮ್ಮಿ ಪ್ರಶಸ್ತಿ === ಗ್ರಂಥಸೂಚಿ === (1956) (1957) – ಶೀರ್ಷಿಕೆಯಲ್ಲಿ ಹೆಚ್ಚುವರಿ 85 ಪುಟಗಳನ್ನು ಸೇರಿಸಲು 1959 ರಲ್ಲಿ ಮರುಪ್ರಕಟಿಸಲ್ಪಟ್ಟಿತು (1959) (1960) (1960) (1961) (1963) (1975) (1976) (1979) (1981) (1984) : (1987) (1989) (1990) (1994) (1998) (2002) : (2002) – , 2009 (2005) : (2007) – , (2007) ' (2009) ' (2011) : , (2012) – : (2017) : (2018) : ( , 2018) 978-1785943010 4.0 . == ಬಾಹ್ಯ ಕೊಂಡಿಗಳು == 2014-05-14 ವೇಬ್ಯಾಕ್ ಮೆಷಿನ್ ನಲ್ಲಿ. ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ . 1976 1998 ( 1 2012) 1998 : , 2011 ' – ' 4 , 27 1998 : . . 13 2016.